Wednesday, July 17, 2013

ನೋವು ಎಂಬ ರಹಸ್ಯ

ಮಾತೊಂದು ಬಂದು, ತುಟಿಯಂಚಿನಲ್ಲಿ ನಿಂತು ಇಣುಕಿತು, ಆ ಕಣ್ಣುಗಳ ಸಂದಿನಲ್ಲೇ ನಿಂತು ಮಿಂಚಿತು. ಆ ನೂಕು ನುಗ್ಗಲ ಸಂಭ್ರಮವಿಲ್ಲದ ಮಡಿದ ಭಾವನೆಗಳು.. ನಿನ್ನೊಡನೆ ಯಾವಾಗಲಾದರೂ , ನನ್ನೊಡನೆ ಕೆಲವೊಮ್ಮೆ,ಮಿಂಚಿ ಕಣ್ಮರೆ ಆಯಿತು. ಇರುವ ಕೆಲವೊಂದು ಅಕ್ಷರಗಳು, ಶಬ್ದಗಳ ವಸ್ತ್ರವನ್ನು ತೊಟ್ಟು, ತುಟಿಗಳ ಅಂಗಳದಲ್ಲಿ ಆಡುತ್ತಿವೆ. ಧ್ವನಿಗಳೇ ಇಲ್ಲದ ಧ್ವನಿಯಲ್ಲಿ ತಮ್ಮನ್ನು ಮರೆತಿವೆ ಇರುವ ಆ ಒಂದು ಮಾತು ಮಾತ್ರ ಅಲ್ಲೇ ಗುಪ್ತ ಹೆಣವಾಗಿ ಉಳಿದಿದೆ. ಇರಲಾರದ, ಬದುಕಲಾರದ ಆ ಗೊತ್ತು ನಿನಗೂ ಇದೆ, ಯಾವುದರ ಅರಿವು ನನಗೂ ಇದೆ.. ಮೌನ ಮಾತನಾಡದೆ, ಪ್ರೇಮ ಗುಪ್ತಗಾಮಿನಿಯಾಗಿಯೇ ಉಳಿಯಿತು.

No comments:

Post a Comment